ಕನ್ನಡ ರಾಜ್ಯೋತ್ಸವ 2024

ಆತ್ಮೀಯ ಕನ್ನಡಿಗರೇ ನಮಸ್ಕಾರ,
ಶ್ರೀಮತಿ ಬಿ ಆರ್ ಛಾಯಾ ಅವರ ಸಂಗೀತ ಕಾರ್ಯಕ್ರಮ ಮತ್ತು ಅದ್ಭುತವಾದ ಸತೀಶ್ ಪಟ್ಲ ತಂಡದ ಯಕ್ಷಗಾನದ ಭವ್ಯ ಯಶಸ್ಸಿನ ನಂತರ, ಒರ್ಲಾಂಡೋ ಕನ್ನಡ ಸಂಘವು ಇನ್ನೂ ಒಂದು ಕಾರ್ಯಕ್ರಮದ ಮೂಲಕ ನಿಮ್ಮನ್ನು ರಂಜಿಸುತ್ತಿದೆ.

ಒರ್ಲಾಂಡೋ ಕನ್ನಡ ಸಂಘವು ಈ ವರ್ಷದ ಕೊನೆಯ ಅತ್ಯಮೂಲ್ಯ ಕಾರ್ಯಕ್ರಮ , ಕರ್ನಾಟಕದ ಏಕತೆಯ ಹಬ್ಬ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಂಕೇತವಾದ ಕನ್ನಡ ರಾಜ್ಯೋತ್ಸವವನ್ನು ಪ್ರಸ್ತುತಪಡಿಸುತ್ತಿದೆ.

ನೀವು ಮತ್ತು ನಿಮ್ಮ ಮಕ್ಕಳು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದೀರಿ. ಹಾಗೆ ಪ್ರಸಿದ್ಧ ಕಲಾವಿದರ ಅನೇಕ ಆಕರ್ಷಕ ಪ್ರದರ್ಶನಗಳು ನಿಮ್ಮನ್ನು ರಂಜಿಸಲಿವೆ. ನೀವು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದೀರಿ ಹಾಗೆ ಅನೇಕ ಆಕರ್ಷಕ ಬಹುಮಾನಗಳನ್ನು ಗೆಲ್ಲುತ್ತೀರಿ.

ಕಾರ್ಯಕ್ರಮವು ಡಿಸೆಂಬರ್ 08, 2024 ರಂದು ಹಿಂದೂ ದೇವಾಲಯ ಕ್ಯಾಸೆಲ್‌ಬೆರಿಯಲ್ಲಿ ಮಧ್ಯಾಹ್ನ 3:00 ರಿಂದ ಪ್ರಾರಂಭವಾಗುತ್ತದೆ.

ಬನ್ನಿ!, ನಿಮ್ಮ ಕುಟುಂಬವನ್ನು ಕರೆತನ್ನಿ!, ನಿಮ್ಮ ಸಂಬಂಧಿಕರನ್ನೂ ಹಾಗೂ ನಿಮ್ಮ ಸ್ನೇಹಿತರನ್ನೂ ಕರೆತನ್ನಿ!!!. ಕಾರ್ಯಕ್ರಮದ ಕೊನೆಯಲ್ಲಿ ದಕ್ಷಿಣ ಭಾರತದ ರುಚಿಕರವಾದ ಭೋಜನವನ್ನು ಸವಿಯಿರಿ. ದಯವಿಟ್ಟು ಭಾರತೀಯ ಹಾಗೂ ಕನ್ನಡ ಸಂಸ್ಕೃತಿ ಮತ್ತು ಭಾಷೆಯನ್ನು ಬೆಂಬಲಿಸಿ, ಪ್ರೋತ್ಸಾಹಿಸಿ.

ರಾಜ್ಯೋತ್ಸವದ ನೋಂದಣಿಗೆ
ಕೆಳಗಿನ QR ಕೋಡ್ ಅಥವಾ ಲಿಂಕ್ ಅನ್ನು ಕ್ಲಿಕ್ ಮಾಡಿ

BUY TICKETS




ನೀವು ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸಿದರೆ, ದಯವಿಟ್ಟು ಕೆಳಗಿನ google ಫಾರ್ಮ್ ಬಳಸಿ ಹೆಸರು ನೋಂದಾಯಿಸಿ. ದಯವಿಟ್ಟು ಫಾರ್ಮ್‌ನ ಎಲ್ಲಾ ಕ್ಷೇತ್ರಗಳನ್ನು ಭರ್ತಿ ಮಾಡಿ. ಫಾರ್ಮ್ ಅನ್ನು ಭರ್ತಿ ಮಾಡಲು ಕೊನೆಯ ದಿನಾಂಕ ನವೆಂಬರ್ 20 ಆಗಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು:
- ನೃತ್ಯ (ಗುಂಪು ಅಥವಾ ಏಕವ್ಯಕ್ತಿ)
- ಹಾಡುವುದು (ಗುಂಪು ಅಥವಾ ಏಕವ್ಯಕ್ತಿ)
- ಕಿರು ನಾಟಕ
- ಏಕ ಪಾತ್ರಾಭಿನಯ


Kannada Rajyotsava Performance Registration form

- ಪ್ರಬಂಧ ಸ್ಪರ್ಧೆ
Kannada Rajyotsava Prabhandha Spardhe

- ಚಿತ್ರಕಲೆ ಸ್ಪರ್ಧೆ

Kannada Rajyotsava Chitrakale Spardhe


- ಮರುಬಳಕೆಯ ಉತ್ಪನ್ನಗಳನ್ನು ಬಳಸಿಕೊಂಡು ಸ್ಮಾರಕಗಳ ಮಾದರಿಗಳನ್ನು ನಿರ್ಮಿಸುವ ಸ್ಪರ್ಧೆ
Kannada Rajyotsava Model Buidling Spardhe


ಯಾವುದೇ ಪ್ರಶ್ನೆಗಳಿಗೆ ಇಮೇಲ್ ಕಳುಹಿಸಿ board@orlandokannadasangha.org
ನಿಮ್ಮ ನಲ್ಮೆಯ ಒರ್ಲಾಂಡೋ ಕನ್ನಡ ಸಂಘ


Dear Kannadigas
After Wonderful Musical Event from Smt BR Chaya and Amazing Yakshagana event by Yakshdhruva foundation headed by Shri Patla Satish Shetty, Orlando Kannada Sangha is coming up with this Year’s last event.


Festival of United Karnataka, Yes KANNADA RAJYOTSAVA on December 8th 2024 at Hindu Temple Hall (HSCF) , Casselberry , Florida 32707. 3:00 PM Onwards.


NOTE: Since it is Sunday and Lot of entries for cultural events we are starting our program at 3 PM

Orlando Kannada Sangha Invites you, your Family, Relatives and friends.

Please come in Large Numbers.

You and your kids will be the artists and performing for this event.

Enjoy the performances of Famous renowned artists.

If you are interested to perform in the Rajyotsava cultural programs, Please fill all the fields of the following Registration forms.

Last date to fill the form is strictly 20th November 2024.



Cultural Events :
Dance (Group/Solo)
Singing (Group/Solo)
Skit
Mono Acting


Kannada Rajyotsava Performance Registration form

Essay Competition:

Kannada Rajyotsava Prabhandha Spardhe

Drawing Competition:
Kannada Rajyotsava Chitrakale Spardhe

Karnataka Model making competition :
Kannada Rajyotsava Model Buidling Spardhe


See you in Large Numbers

for any questions please send email to board@orlandokannadasangha.org

Orlando Kannada Sangha Board

!!!!!! YAKSHAGANA (OPERA of EAST)-2024 !!!!!!

This image has an empty alt attribute; its file name is Final-Flyer-819x1024.jpg

ORLANDO KANNADA SANGHA BOARD and YAKSHADHRUVA PATLA Foundation of India  is INVITING you with your Family and Friends for the famous art of YAKSHAGANA.

Do Not Miss the rare opportunity to watch Opera of East YAKSHAGANA, a dance-drama of South India.

MAP
Directions
: https://maps.app.goo.gl/cVmvfSjWwdNq1hUd9

Tickets :

Click the Link to Buy Tickets, or Scan QR Code

 YAKSHAGANA TICKETS

Please signup for the event quickly as we have limited seats available !

$10 per admission till August 18th

$20 per admission after August 18th

Kids Below 16 years admission free

Registration closes on September 10th

Dear All

YAKSHAGANA is a rare combination of dance, music, song, scholarly dialogues and vibrant costumes.

Elaborate and colorful costumes, makeup, and masks constitute some of the most-striking features of the art form.

Enjoy the Delicious South Indian Dinner at the end of the program.

ಆತ್ಮೀಯ ಕನ್ನಡಿಗರೇ

ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದ ನೃತ್ಯಾಭಿನಯ, ಸುಶ್ರಾವ್ಯ ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ ಯಕ್ಷಗಾನ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.

ಇಂತಹ ಪ್ರಖ್ಯಾತ ಯಕ್ಷಗಾನವನ್ನು ನಿಮ್ಮ ಒರ್ಲಾಂಡೋ ಕನ್ನಡ ಸಂಘ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಇಂಡಿಯಾ, ಅದ್ಭುತ ಕಲೆಯನ್ನು ಸೆಪ್ಟೆಂಬರ್ 14, 2024 ರಂದು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿವೆ.

ಪ್ರೇಕ್ಷಕರನ್ನು ಸಮ್ಮೋಹನಗೊಳಿಸುವ ಯಕ್ಷಗಾನಕ್ಕೆ ಸ್ವಾಗತ, ಸುಸ್ವಾಗತ.

ಬನ್ನಿ!, ನಿಮ್ಮ ಕುಟುಂಬವನ್ನು ಕರೆತನ್ನಿ!, ನಿಮ್ಮ ಸಂಬಂಧಿಕರನ್ನೂ ಹಾಗೂ ನಿಮ್ಮ ಸ್ನೇಹಿತರನ್ನೂ ಕರೆತನ್ನಿ!!!. ಕಾರ್ಯಕ್ರಮದ ಕೊನೆಯಲ್ಲಿ ದಕ್ಷಿಣ ಭಾರತದ ರುಚಿಕರವಾದ ಭೋಜನವನ್ನು ಸವಿಯಿರಿ. ದಯವಿಟ್ಟು ಭಾರತೀಯ ಹಾಗೂ ಕನ್ನಡ ಸಂಸ್ಕೃತಿ, ಭಾಷೆ ಮತ್ತು ಕಲಾವಿದರನ್ನು ಬೆಂಬಲಿಸಿ, ಪ್ರೋತ್ಸಾಹಿಸಿ.

ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ಹಾಗೂ ಅವರ ತಂಡದ ಆಹ್ವಾನವನ್ನು ಆಲಿಸಿ, ಗೌರವಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿ.

Ugadi 2024

ಯುಗಾದಿ ಅಂದರೆ….
ಚಿಗುರಿನ ಪಲ್ಲವಿ ನೆನಪಿನ ಚರಣ
ಅರಿವಿನ ಹೂರಣ ತಿಳಿವಿನ ರಂಗೋಲಿ
ಬದುಕಿನ ಆರಂಭ ಬೆಳಗುವ ಮನಸ್ಸು
ಹೊಸ ಬಟ್ಟೆ ಒಬ್ಬಟ್ಟಿನ ತಟ್ಟೆ
ಸಂಕಲ್ಪಗಳ ತೇರು ಭಾವ ಪುನರುತ್ಥಾನ
ವಸಂತನ ಆಗಮನ ನವಯುಗದ ಮುನ್ನುಡಿ !

ಆತ್ಮೀಯ ಕನ್ನಡಿಗರೇ,

ಒರ್ಲಾಂಡೋ ಕನ್ನಡ ಸಂಘ ಈ ಯುಗಾದಿಯನ್ನು ಕರ್ನಾಟಕ ಗಾನ ಕೋಗಿಲೆ, ಕನ್ನಡ ಚಲನಚಿತ್ರದ ಅದ್ಭುತ ಮೇರು ಗಾಯಕಿ ಶ್ರೀಮತಿ ಬಿ ಆರ್ ಛಾಯಾ ಅವರ ಸುಮಧುರ ಸಂಗೀತದೊಂದಿಗೆ ಸಂಭ್ರಮಿಸುತ್ತಿದೆ.

ವಸಂತ ಋತುವಿನ ಆಗಮನಕ್ಕೆ ಇದಕ್ಕಿಂತ ವಿಶೇಷತೆ ಏನು ಬೇಕು.

ಬನ್ನಿ ನಿಮ್ಮ ಕುಟುಂಬವನ್ನು ಕರೆತನ್ನಿ!, ನಿಮ್ಮ ಸಂಬಂಧಿಕರನ್ನು ಕರೆತನ್ನಿ!!, ನಿಮ್ಮ ಸ್ನೇಹಿತರನ್ನು ಕರೆತನ್ನಿ!!!. ಪಿಕ್ನಿಕ್ ಮತ್ತು ಸಂಗೀತದೊಂದಿಗೆ ಯುಗಾದಿಯನ್ನು ಏಪ್ರಿಲ್ 14 ರಂದು ಆಚರಿಸೋಣ.

ಪಿಕ್ನಿಕ್ ಸ್ವಾಗತ ತಿಂಡಿ ಮತ್ತು ಪಾನೀಯದೊಂದಿಗೆ ಮಧ್ಯಾಹ್ನ 2 ರಿಂದ ಪ್ರಾರಂಭವಾಗುತ್ತದೆ. ಸಂಜೆ ತಿಂಡಿ ಮತ್ತು ಕಾಫಿಯ ಮೂಲಕ ನಾವು ಶ್ರೀಮತಿ ಬಿ ಆರ್ ಛಾಯಾ ಅವರ ಸಂಗೀತ ಕಚೇರಿಯನ್ನು ಪ್ರಾರಂಭಿಸುತ್ತೇವೆ. ರುಚಿಕರವಾದ ದಕ್ಷಿಣ ಭಾರತೀಯ ಆಹಾರದೊಂದಿಗೆ ಕಾರ್ಯಕ್ರಮವು ಕೊನೆಗೊಳ್ಳುತ್ತದೆ.

ದಯವಿಟ್ಟು ಕನ್ನಡ ಸಂಸ್ಕೃತಿ, ಭಾಷೆ ಮತ್ತು ಕಲಾವಿದರನ್ನು ಬೆಂಬಲಿಸಿ.

ಜೈ ಹಿಂದ್, ಜೈ ಕರ್ನಾಟಕ ಮಾತೆ

Orlando Kannada Sangha Board is inviting you with your Family and Friends, And invites All Kannadigas from Central Florida for an exciting UGADI 2024 Spring Picnic (ವಸಂತೋತ್ಸವ).

We are hosting Games for all age groups followed by Music concert from Renowned Playback Singer of Kannada Film Industry Smt BR Chaya.

Event starts at 2 PM with welcome drink and snacks followed by picnic games.

Evening Music Concert starts with Tasty snacks/Tea/Coffee and ends with South Indian delicious dinner.

You are welcome to participate on Smt. BR Chaya songs, like dance and fancy dress. Details will be shared soon for signup.

Please signup for the event quickly as we have limited seats available !

OKS Members:
25$ per adult and 50$ per family.

Non-Members:
30$ per adult and 60$ per family.

For Online Payment Click on the following link

Ugadi-2024-celebration-tickets/

For 2024 Orlando Kannada Sangha Membership

OKS Membership

For Donations please use following link

Donate

Venue :

SUNDAY, APRIL 14 AT
2 PM ONWARDS

830 MAGNOLIA DR,
ALTAMONTE SPRINGS, FL 32701

https://maps.app.goo.gl/CvreJMnQXctmdw1Q6