ಆತ್ಮೀಯ ಕನ್ನಡಿಗರೇ ನಮಸ್ಕಾರ, ಶ್ರೀಮತಿ ಬಿ ಆರ್ ಛಾಯಾ ಅವರ ಸಂಗೀತ ಕಾರ್ಯಕ್ರಮ ಮತ್ತು ಅದ್ಭುತವಾದ ಸತೀಶ್ ಪಟ್ಲ ತಂಡದ ಯಕ್ಷಗಾನದ ಭವ್ಯ ಯಶಸ್ಸಿನ ನಂತರ, ಒರ್ಲಾಂಡೋ ಕನ್ನಡ ಸಂಘವು ಇನ್ನೂ ಒಂದು ಕಾರ್ಯಕ್ರಮದ ಮೂಲಕ ನಿಮ್ಮನ್ನು ರಂಜಿಸುತ್ತಿದೆ.
ಒರ್ಲಾಂಡೋ ಕನ್ನಡ ಸಂಘವು ಈ ವರ್ಷದ ಕೊನೆಯ ಅತ್ಯಮೂಲ್ಯ ಕಾರ್ಯಕ್ರಮ , ಕರ್ನಾಟಕದ ಏಕತೆಯ ಹಬ್ಬ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಂಕೇತವಾದ ಕನ್ನಡ ರಾಜ್ಯೋತ್ಸವವನ್ನು ಪ್ರಸ್ತುತಪಡಿಸುತ್ತಿದೆ.
ನೀವು ಮತ್ತು ನಿಮ್ಮ ಮಕ್ಕಳು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದೀರಿ. ಹಾಗೆ ಪ್ರಸಿದ್ಧ ಕಲಾವಿದರ ಅನೇಕ ಆಕರ್ಷಕ ಪ್ರದರ್ಶನಗಳು ನಿಮ್ಮನ್ನು ರಂಜಿಸಲಿವೆ. ನೀವು ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದೀರಿ ಹಾಗೆ ಅನೇಕ ಆಕರ್ಷಕ ಬಹುಮಾನಗಳನ್ನು ಗೆಲ್ಲುತ್ತೀರಿ.
ಕಾರ್ಯಕ್ರಮವು ಡಿಸೆಂಬರ್ 08, 2024 ರಂದು ಹಿಂದೂ ದೇವಾಲಯ ಕ್ಯಾಸೆಲ್‌ಬೆರಿಯಲ್ಲಿ ಮಧ್ಯಾಹ್ನ 3:30 ರಿಂದ ಪ್ರಾರಂಭವಾಗುತ್ತದೆ.
ಬನ್ನಿ!, ನಿಮ್ಮ ಕುಟುಂಬವನ್ನು ಕರೆತನ್ನಿ!, ನಿಮ್ಮ ಸಂಬಂಧಿಕರನ್ನೂ ಹಾಗೂ ನಿಮ್ಮ ಸ್ನೇಹಿತರನ್ನೂ ಕರೆತನ್ನಿ!!!. ಕಾರ್ಯಕ್ರಮದ ಕೊನೆಯಲ್ಲಿ ದಕ್ಷಿಣ ಭಾರತದ ರುಚಿಕರವಾದ ಭೋಜನವನ್ನು ಸವಿಯಿರಿ. ದಯವಿಟ್ಟು ಭಾರತೀಯ ಹಾಗೂ ಕನ್ನಡ ಸಂಸ್ಕೃತಿ ಮತ್ತು ಭಾಷೆಯನ್ನು ಬೆಂಬಲಿಸಿ, ಪ್ರೋತ್ಸಾಹಿಸಿ.
ರಾಜ್ಯೋತ್ಸವದ ನೋಂದಣಿಗೆಕೆಳಗಿನ QR ಕೋಡ್ ಅಥವಾ ಲಿಂಕ್ ಅನ್ನು ಕ್ಲಿಕ್ ಮಾಡಿ
ನೀವು ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸಿದರೆ, ದಯವಿಟ್ಟು ಕೆಳಗಿನ google ಫಾರ್ಮ್ ಬಳಸಿ ಹೆಸರು ನೋಂದಾಯಿಸಿ. ದಯವಿಟ್ಟು ಫಾರ್ಮ್‌ನ ಎಲ್ಲಾ ಕ್ಷೇತ್ರಗಳನ್ನು ಭರ್ತಿ ಮಾಡಿ. ಫಾರ್ಮ್ ಅನ್ನು ಭರ್ತಿ ಮಾಡಲು ಕೊನೆಯ ದಿನಾಂಕ ನವೆಂಬರ್ 20 ಆಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: - ನೃತ್ಯ (ಗುಂಪು ಅಥವಾ ಏಕವ್ಯಕ್ತಿ) - ಹಾಡುವುದು (ಗುಂಪು ಅಥವಾ ಏಕವ್ಯಕ್ತಿ) - ಕಿರು ನಾಟಕ - ಏಕ ಪಾತ್ರಾಭಿನಯ
ಯಾವುದೇ ಪ್ರಶ್ನೆಗಳಿಗೆ ಇಮೇಲ್ ಕಳುಹಿಸಿ board@orlandokannadasangha.org ನಿಮ್ಮ ನಲ್ಮೆಯ ಒರ್ಲಾಂಡೋ ಕನ್ನಡ ಸಂಘ
Dear Kannadigas After Wonderful Musical Event from Smt BR Chaya and Amazing Yakshagana event by Yakshdhruva foundation headed by Shri Patla Satish Shetty, Orlando Kannada Sangha is coming up with this Year’s last event.
Festival of United Karnataka, Yes KANNADA RAJYOTSAVA on December 8th 2024 at Hindu Temple Hall (HSCF) , Casselberry , Florida 32707. 3:30 PM Onwards.
Orlando Kannada Sangha Invites you, your Family, Relatives and friends.
Please come in Large Numbers.
You and your kids will be the artists and performing for this event. Enjoy the performances of Famous renowned artists.
If you are interested to perform in the Rajyotsava cultural programs, Please fill all the fields of the following Registration forms.
Last date to fill the form is strictly 20th November 2024.
Cultural Events : Dance (Group/Solo) Singing (Group/Solo) Skit Mono Acting