Member Contributions

We invite contributions from our members. These contributions can be anything, from young and from old. For example, kids might want to share their photos or essays about recent trips. Similarly, senior citizens could share poems or articles of their own.

                                     ಕನ್ನಡ ಸಂಘಗಳು
ಅಮೇರಿಕಾ – ಕರ್ನಾಟಕ (ನಾದ ಕನ್ನಡ ಕಿಲಿಮಣೆಯನ್ನು ಬಳಸಲಾಗಿದೆ)

ಕರ್ನಾಟಕಲ್ಲಿ ಕನ್ನಡವೇ ಇರುವದರಿಂದ, ಎಲ್ಲವೂ ಕನ್ನಡ ಸಂಘಘಗಳು, ಬೇರೆ ಬೇರೆ ಹೆಸರಿನಲ್ಲಿ ಉದಾ:- ಅಕ್ಕನ ಬಳಗ, ಕರ್ನಾಟಕ ವಿದ್ಯಾವರ್ಧಕ ಸಂಘ, ಉ.ಕ. ಲೇಖಕಿಯರ ಸಂಘ, ಭಾರತೀ ಮಹಿಳಾ ಮಂಡಳಿ ಹಿಗೇ ಅನೇಕ ಮಹಿಳಾ ಸಂಘಗಳೇ ಹೆಚ್ಚಿಗೆ. ಇಲ್ಲಿ ಆಧ್ಯಾತ್ಮಿಕ, ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಒಳ್ಳೆಯ ಕಾರ್ಯಕ್ರಮಗಳು ನಡೀತಾನೇ ಇರ್ತಾವೆ. ಇನ್ನು ಮಕ್ಕಳಿಗೆ ಓದವುದು ತುಂಬಾ ಇರುವುದರಿಂದ ಮಕ್ಕಳ ಸಂಘಗಳು ಅಂತ ಇರುವದಿಲ್ಲ. ಆದರೆ ಬಸವ ಜಯಂತಿ, ಅಕ್ಕಮಹಾದದೇವಿ ಜಯಂತಿ, ಕರ್ನಾಟಕ ರಾಜ್ಯೋತ್ಸವ, ಮಕ್ಕಳ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ರಿಪಬ್ಲಿಕ್ ಡೇ, ವಿಜಯ ದಶಮಿ ಹಬ್ಬಗಳ ಅಂಗವಾಗಿ ಮಕ್ಕಳಿಗಾಗಿ ವಚನ ಲೇಖನ, ಪಠಣ ಆರ್ಧೈಸುವದು, ದೇಶ ಭಕ್ತಿ ಗೀತೆ, ಜಾನಪದ ಗೀತೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಶೂರರ ಹಾಗೂ ಶರಣ ಶರಣಿಯಯರ, ಕಿರು ನಾಟಕಗಳು, ವೇಷ ಭೂಷಣಗಳ ಸ್ಪರ್ಧೆಗಳನ್ನು ಸಂಫಗಳು ಏರ್ಪಡಿಸುತ್ತವೆ. ಹೀಗೆ ಸರ್ವರಲ್ಲಿ ಚ್ಯೆತನ್ಯ ತುಂಬುವ ಯಶಸ್ವಿ ಕಾರ್ಯಕ್ರಮಗಳು ಒಳ್ಳೆಯ ಹುರುಪಿನಿಂದ ನಡೀತಾನೆ ಇರುತ್ತವೆ.

ಇನ್ನು ಅಮೇರಿಕದಲ್ಲಿ ನವೆಂಬರ ೨೩, ೨೦೧೩ರಂದು ಆರ್ಲ್ಯಾಂಡೋ ಕನ್ನಡ ಸಂಘ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಂಥ ಕಾರ್ಯಕ್ರಮ ಕೂಡ ತುಂಬ ಚೆನ್ನಾಗಿ ಮೂಡಿಬಂದವು. ಇನ್ನೂ ‘ಹನಿಮೂನ’ ಹಾಸ್ಯ ನಾಟಕವನ್ನ ಪತಿ ಪತ್ನಿಯರು ಕೂಡಿ ಮಾಡಿದ್ದು ಒಂದು ವಿಶೇಷವಾಗಿತ್ತು. ತುಂಬಾ ಖುಶಿ. ಇದು ನಮ್ಮ ಕರ್ನಾಟಕದಲ್ಲಿ ಅವಕಾಶ ಸಿಕ್ಕಿಲ್ಲ. ಬಹುಶಃ ಕರ್ನಾಟಕದಲ್ಲಿ ಪತ್ನಿಯರ ಜೊತೆ ಪತಿಮಹಾಶಯರು ನಾಟಕ ಮಾಡಲು ಬರಲಿಕ್ಕಿಲ್ಲ ಅನ್ನಿಸುತ್ತಿದೆ. ಏನೂ ಪತ್ನಿಯಯರು ಕರೆಯುವುದಿಲ್ಲವೋ ಅದೂ ಗೋತ್ತಿಲ್ಲ. ಪುರುಷರ ಪಾತ್ರವನ್ನು ಕೂಡ ಮಹಳೆಯರೆ ವೇಷಧರಿಸಿ ಮಾಡವದಾಗುತ್ತದೆ.

ಇಲ್ಲಿಯ ಯುವತಿಯರು ಜಾನಪದ, ಕೋಲಾಟ, ವಚನ ನೃತ್ಯಗಳನ್ನು ಮಾಡಿದಲ್ಲಿ ಇನ್ನೂ ಚೆನ್ನಾಗಿರುತ್ತದೆ. ಕರ್ನಾಟಕಲ್ಲಿ ಕಾರ್ಯಕ್ರಮಗಳು ಪ್ರಾರಂಭವಾಗುವ ಮುನ್ನ ಸ್ಟೇಜ್ ಮೇಲೆ ಸಂಘದ ಅಧ್ಯಕ್ಷರು, ಉಪಪಾಧ್ಯಕ್ಷರು, ಕಾರ್ಯಕ್ರಮ ಅಧ್ಯಕ್ಷರು ಇದ್ದು, ಸಂಘದ ಅಧ್ಯಕ್ಷರಿಂದ ಸ್ವಾಗತ ಭಾಷಣ, ಸೆಕ್ರೆಟ್ರಂದ ಅತಿಥಿಗಳ ಪರಿಚಯ, ನಂತರ ಜ್ಯೋತಿ ಬೆಳಗಿಸಿ, ಫಲ-ಗ್ರಂಥಾರ್ಪಣೆ, ಮುಗಿದ ನಂತರ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ. ನೀವೂ ಹೀಗೇ ಮಾಡಿಂತ ಹೇಳಲು ಸಂತೋಷ ಅನ್ನಿಸುತ್ತದೆ. ಶುಭಾಶಯಗಳೊಂದಿಗೆ ,

ಶ್ರೀಮತಿ ಕಸ್ತೂರಿ ಜಿಗಜಿನ್ನಿ
ಮಾಜಿ ಅಧ್ಯಕ್ಷರು
ಅಕ್ಕನ ಬಳಗ ಡಿ.ಸಿ. ಕಂಪೌಂಡ ಧಾರವಾಡ